Thursday, January 27, 2011

ಅಮ್ಮ - ನೀಲವ್ಯೋಮ ವೃಕ್ಷ

ಎಲ್ಲಿ ದೊರಕುವುದು ಮತ್ತೆ ಆ ನಿನ್ನ ಮಮತೆ
ಆ ಪ್ರೀತಿಯ ಸಾ೦ತ್ವನ,
ಆ ಲಾಲಿ ಹಾಡಿನ ಜೋಗುಳ,
ಕಾಡುತಿದೆ ನಿನ್ನ ಮುದ್ದಿನ ಕೊರತೆ..

ಮುತ್ತಿಟ್ಟು, ತುತ್ತಿಟ್ಟ ತಾಯಿ,
ವೃಕ್ಷವಾಗಿ ಪ್ರೇಮದ ನೆರಳು ನೀಡಿದ ಮಾಯಿ,
ಯಾವುದಕ್ಕೆ ಹೋಲಿಸಲಿ ನಿನ್ನ ನಲ್ಮೆಯ,
ಹೇಗೆ ಮರೆಯಲಿ ನಿನ್ನ ವಾತ್ಸಲ್ಯವ,

ಬಸವಳಿದ ಈ ಜೀವ ನಿನ್ನ ಮಡಿಲಲ್ಲಿ ಮಲಗಬೇಕು,
ನಿನ್ನ ಸಿಹಿ ಜೇನಿನ ಮಮತೆಯ ಮತ್ತೆ ಸವಿಯಬೇಕು,
ಇವಳೆ ನನ್ನ ಅಮ್ಮ ಎ೦ದು ಹೆಮ್ಮೆಯಿ೦ದ ಹೇಳಬೇಕು,
ಅಮ್ಮ ಎ೦ದೆ೦ದು ನೀ ನನ್ನ ಜೊತೆ ಇರಬೇಕು.

3 comments:

  1. ಮಾತೇ ಮುತ್ತು ಜಾಣ
    ಮಾತೆ ಮುತ್ತಿನ ತಾಣ
    "ಮಾತೇ" ದೈವವನ್ನು ಮರೆಯಬೇಡ ಚಿನ್ನ..

    ReplyDelete
  2. beautiful composition....keep it up.

    ReplyDelete
  3. Thanks Anna. your words of encouragement means a lot to me in this..

    ReplyDelete